ಇನಾಮ್ದಾರ್

ಕಪ್ಪು ಸುಂದರಿಯ ಸುತ್ತ

ಉತ್ತರ ಕರ್ನಾಟಕದ ಗಟ್ಟಿ ನೆಲದ ಇನಾಮ್ದಾರ್ ವಂಶಕ್ಕೂ, ಪಶ್ಚಿಮ ಘಟ್ಟದ ತಪ್ಪಲಿ‌ನಲ್ಲಿರುವ ಈ ಕಾಡು ವಾಸಿಗಳ ನಡುವೆ ತಲೆಮಾರುಗಳಿಂದ ಬೆಸೆದು ಬಂದಿರುವ ಒಂದು ಆಚರಣೆಯೇ ಎರಡು ವಂಶಸ್ಥರ ನಡುವಿನ ಭಾಂದವ್ಯದ ಕೊಂಡಿಯಾಗಿತ್ತು. ಸಮಯ ಸಾಧಕರು, ಶಕುನಿಗಳ ವರ್ಣ ದ್ವೇಷವೆನ್ನುವ ಕುತಂತ್ರದ ವಿಷ ಬೀಜ ಬಿತ್ತಿದ ಪರಿಣಾಮ ಶಿವನ ಆರಾಧಕರ ನಡುವೆ ವೈಮನಸ್ಯ ಬೆಳೆಯುತ್ತದೆ.

4K

ಸಾವಿರ+

ಟೀಸರ್ ವೀಕ್ಷಣೆಗಳು

ಈಗಲೇ ವೀಕ್ಷಿಸಿ
ಮೊದಲ ವಿಡಿಯೋ ಹಾಡು

ಸಿಲ್ಕು ಮಿಲ್ಕು

ಸಂಗೀತ : ರಾಕೇಶ್ ಆಚಾರ್ಯ
ಗಾಯಕರು : ರವೀಂದ್ರ ಸೊರಗಾವಿ, ಇಂದು ನಾಗರಾಜ್
ಸಾಹಿತ್ಯ : ಕುಂತೂರು ಶ್ರೀಕಾಂತ್

ಚಲನಚಿತ್ರ ಸಾರಾಂಶ

ಒಂದು ಕಡೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನ ಕುಲ ದೇವರಂತೆ ತಲೆಮಾರುಗಳಿಂದ ಆರಾಧಿಸಿಕೊಂಡು ಬಂದಿರುವ ಇನಾಮ್ದಾರ್ ವಂಶ. ಇನ್ನೊಂದು ಕಡೆಯಲ್ಲಿ ಸಾಮಾಜಿಕ ಕಟ್ಟು ಕಟ್ಟಳೆಗಳಿಂದ ದೂರವಾಗಿ ಉಳಿದು ಕಾಡು ಮತ್ತು ಪ್ರಕೃತಿ ನಡುವೆ ನಂಬಿಕೆಯ ಜೊತೆಗೆ ಜೀವನ ನಡೆಸುತ್ತಿರುವ ಕಾಡು ಜನಾಂಗ. ಉತ್ತರ ಕರ್ನಾಟಕದ ಗಟ್ಟಿ ನೆಲದ ಇನಾಮ್ದಾರ್ ವಂಶಕ್ಕೂ, ಪಶ್ಚಿಮ ಘಟ್ಟದ ತಪ್ಪಲಿ‌ನಲ್ಲಿರುವ ಈ ಕಾಡು ವಾಸಿಗಳ ನಡುವೆ ತಲೆಮಾರುಗಳಿಂದ ಬೆಸೆದು ಬಂದಿರುವ ಒಂದು ಆಚರಣೆಯೇ ಎರಡು ವಂಶಸ್ಥರ ನಡುವಿನ ಭಾಂದವ್ಯದ ಕೊಂಡಿಯಾಗಿತ್ತು. ಸಮಯ ಸಾಧಕರು, ಶಕುನಿಗಳ ವರ್ಣ ದ್ವೇಷವೆನ್ನುವ ಕುತಂತ್ರದ ವಿಷ ಬೀಜ ಬಿತ್ತಿದ ಪರಿಣಾಮ ಶಿವನ ಆರಾಧಕರ ನಡುವೆ ವೈಮನಸ್ಯ ಬೆಳೆಯುತ್ತದೆ. ಇಂತಹ ವಿಷಮ ಗಳಿಗೆಯಲ್ಲೂ, ನಂಬಿದ ಶಿವನ ವರಪ್ರಸಾದ ರೂಪದಲ್ಲಿ ಇನಾಮ್ದಾರ್ ಕುಟುಂಬದಲ್ಲಿ ಜನಿಸುವ ಒಂದು ಮಗು ಇವರ ವರ್ಣ ದ್ವೇಷಕ್ಕೆ ಹೇಗೆ ಅಂತ್ಯ ಹಾಡುತ್ತದೆ ? ಪ್ರಕೃತಿ ಮತ್ತು ನಂಬಿಕೆಯ ಆಚರಣೆ ಮುಂದುವರಿಯುತ್ತದೋ ? ಈ ಕೂತುಹಲಕ್ಕಾಗಿ ನೀವು ಇನಾಮ್ದಾರ್ ಚಿತ್ರ ವೀಕ್ಷಿಸಿ...